ಆಜ್ಞಾಕರ್ತೃವಿನ ಅಂಗನೆಗೆ ಮೋಹದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಜ್ಞಾಕರ್ತೃವಿನ ಅಂಗನೆಗೆ ಮೋಹದ ಮಗಳು ಹುಟ್ಟಿದಳು ನೋಡಾ. ಆಕೆಯ ವಿಲಾಸದಿಂದ ಲೋಕಾದಿಲೋಕಂಗಳೆಲ್ಲ ಉದಯಿಸಿದವು ನೋಡಾ. ಆಯಾಕೆ ನಿಂದಲ್ಲೆ ಪ್ರಳಯವಾಗುತ್ತಿಪ್ಪವು ನೋಡಾ. ಆ ಲೋಕ ಲೌಕಿಕವನತಿಗಳೆದು
ಆಕೆಯ ಸಂಗಕ್ಕೆ ಹೊರಗಾದಾತನೇ
ಏಕಮೇವ ನ ದ್ವಿತೀಯ ಪರಬ್ರಹ್ಮವು. ತಾನು ತಾನಾದ ಪ್ರಾಣಲಿಂಗೈಕ್ಯನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.