ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಈ ಮೂರು ಮಲತ್ರಯಂಗಳು. ಒಂದು ಕೆಂಪಿನ ಮಲ; ಒಂದು ಬೆಳ್ಳಿನ ಮಲ; ಒಂದು ಕಪ್ಪಿನ ಮಲ. ಈ ಮೂರು ಪ್ರಕಾರದ ಮಲವ ಭುಂಜಿಸಿ
ಸಂಸಾರ ವಿಷಯ ಕೂಪವೆಂಬುವ ತಿಪ್ಪೆಯ ಗುಂಡಿಯ ನೀರಕುಡಿದು
ಮಾಯಾಮೋಹವೆಂಬ ಹಾಳುಗೇರಿಯ ಗೊಟ್ಟಿನಲ್ಲಿ ಬಿದ್ದು
ಸೂಕರನಂತಿಪ್ಪವರ ಎಂತು ಭಕ್ತರೆಂಬೆ? ಎಂತು ದೇವರೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.