ಆತ್ಮನು ಅಷ್ಟದಳ ಕಮಲದಳಂಗಳ

ವಿಕಿಸೋರ್ಸ್ದಿಂದ



Pages   (key to Page Status)   


ಆತ್ಮನು
ಅಷ್ಟದಳ
ಕಮಲದಳಂಗಳ
ಮೆಟ್ಟಿ
ಚರಿಸಿ
ಆಡುವ
ವಿಧವೆಂತೆಂದಡೆ;
ಇಂದ್ರದಳವೇರಿದಲ್ಲಿ
ಗುಣಿಯಾಗಿಹನು.
ಅಗ್ನಿದಳವೇರಿದಲ್ಲಿ
ಕ್ಷುಧಾತುರದಿಂ
ಹಸಿದಿರುತ್ತಿಹನು.
ಯಮದಳವೇರಿದಲ್ಲಿ
ಕ್ರೋಧದಿಂ
ದುರಿತ
ಚೇಷ್ಟಿತನಾಗಿಹನು.
ನೈಋತ್ಯದಳವೇರಿದಲ್ಲಿ
ದ್ವೇಷಿಸುತ್ತಲಿಹನು.
ವರುಣದ?ವೇರಿದಲ್ಲಿ
ನಿದ್ರೆಗೈವುತ್ತಿಹನು.
ವಾಯುವ್ಯದಳವೇರಿದಲ್ಲಿ
ಸಂಚಲಚಿತ್ತದಿಂ
ಗಮನಿಯಾಗಿಹನು.
ಕುಬೇರದಳವೇರಿದಲ್ಲಿ
ಧರ್ಮಬುದ್ಧಿಯಿಂ
ಪರಹಿತಾರ್ಥಿಯಾಗಿಹನು.
ಈಶಾನ್ಯದಳವೇರಿದಲ್ಲಿ
ಸ್ತ್ರೀಗೋಷಿ*
ವಿಷಯಾತುರನಾಗಿಹನು.
ಮಧ್ಯಸ್ಥಾನಕ್ಕೆ
ಬಂದು
ನಿಂದಲ್ಲಿ
ಸದ್ಭಾವಿಯಾಗಿ
ಉತ್ತರಪಥ
ಪರಮಾರ್ಥ
ಮೋಕ್ಷಗಾಮಿಯಾಗಿಹನು.
ಇಂತೀ
ಅಷ್ಟದಳಂಗಳ
ಮೆಟ್ಟಿ
ಚರಿಸುವ
ಹಂಸನ
ನೆಲೆಗೆಡಿಸಿ
ಸದ್ಭಾವಿಯಾಗಿರಬಲ್ಲ
ಕೂಡಲಚೆನ್ನಸಂಗಾ
ನಿಮ್ಮ
ಶರಣನು