ಆದಿಗೆ ಅನಾದಿಗೆ ಭೇದವುಂಟೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಗೆ ಅನಾದಿಗೆ ಭೇದವುಂಟೆ ? ಆದಿ ಲಿಂಗ ಅನಾದಿ ಶರಣನೆಂಬುದು
ತನ್ನಿಂದ ತಾ ಮಾಡಲಾಯಿತ್ತು. ಧರೆಯಾಕಾಶ ಭುವನ ಭವನಂಗಳು ಹುಟ್ಟದ ಮುನ್ನ ಅನಾದಿ ಪರಶಿವನು ತಾನೆ ತನ್ನ ಲೀಲೆಗೆ ಸಾಕಾರವ ಧರಿಸಿದಡೆ ಆ ಸಾಕಾರವೆ ಈ ಸಾಕಾರವಾಯಿತ್ತು. ಎನ್ನ ಸಾಕಾರದ ಆದಿಯನೂ
ಎನ್ನ ನಿರಾಕಾರದ ಆದಿಯನೂ ಬಸವಣ್ಣ ಬಲ್ಲವನಾಗಿ
ಗುಹೇಶ್ವರಲಿಂಗದ ಘನವು ಬಸವಣ್ಣನಿಂದೆನಗೆ ಸಾಧ್ಯವಾಯಿತ್ತು ಕಾಣಾ ಚನ್ನಬಸವಣ್ಣಾ !