ಆದಿಯನರಿಯರು ಅನಾದಿಯನರಿಯರು, ಒಂದರೊಳಗಿಪ್ಪ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯನರಿಯರು ಅನಾದಿಯನರಿಯರು
ಒಂದರೊಳಗಿಪ್ಪ ಎರಡನರಿಯರು
ಎರಡರೊಳಗಿಪ್ಪ ಮೂರರ ಕೀಲನರಿಯರು
ಮೂರರ ಸಂದು ಆರಾದುದನರಿಯರು. ಆರೆಂದು ನುಡಿವ ಗಾರು ಮಾತು ತಾನಲ್ಲ ಗುಹೇಶ್ವರ[ನ] ನಿಲವನರಿದಡೆ
_ಒಂದೂ ಇಲ್ಲ. ಅರಿಯದಿರ್ದಡೆ ಬಹುಮುಖವಯ್ಯಾ.