ಆದಿಯಲ್ಲಿ ಬಂದುದಲ್ಲ, ನಾದಬಿಂದುವಿನಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯಲ್ಲಿ ಬಂದುದಲ್ಲ
ನಾದಬಿಂದುವಿನಲ್ಲಿ ಆದುದಲ್ಲ. ನಾದವನು ಕಳೆ ನುಂಗಿ
ಕಳೆಯ ನಾದವ ನುಂಗಿ
ಹೊಳೆವ ಲಿಂಗ ನಿನಗೆಂತು ಸಾಧ್ಯವಾಯಿತ್ತು ಹೇಳಾ ? ಅಪ್ಪಣೆಯಿಲ್ಲದ ಅಪ್ಪಣೆ ಸಲುವುದೆ ಜಂಗಮದೊಳಗೆ ? ಇದು ಕಾರಣ- ಕೂಡಲಚೆನ್ನಸಂಗಮದೇವರಲ್ಲಿ ಆದಿಸೋಂಕು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ !