ಆದಿಯಲ್ಲಿ ಬ್ರಹ್ಮಪದವಾಯಿತ್ತು. ಶ್ರೀ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಬ್ರಹ್ಮಂಗೆ ಬ್ರಹ್ಮಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ವಿಷ್ಣುವಿಂಗೆ ವಿಷ್ಣುಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ದೇವತೆಗಳಿಗೆ ದೇವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿ ಸ್ನಾನವ ಮಾಡಿದ ಋಷಿಗಳಿಗೆ ಋಷಿಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಗಂಧರ್ವರುಗಳಿಗೆ ಗಂಧರ್ವಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ರುದ್ರಗಣರಿಗೆ ರುದ್ರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಯಕ್ಷರಿಗೆ ಯಕ್ಷಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಕಿನ್ನರರಿಗೆ ಕಿನ್ನರಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಅಮರಗಣರಿಗೆ ಅಮರಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಪಿತೃಗಣರಿಗೆ ಪಿತೃಗಣಪದವಾಯಿತ್ತು. ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಭೂತಗಣರಿಗೆ ಭೂತಗಣಪದವಾಯಿತ್ತು. ಅದೆಂತೆಂದೊಡೆ : ``ಬ್ರಹ್ಮವಿಷ್ಣ್ವಾದಿದೇವಾ ಋಷಯೋ ಗಂಧರ್ವಾ ಯಕ್ಷಕಿನ್ನರಾಃ