ವಿಷಯಕ್ಕೆ ಹೋಗು

ಆದಿಯಾಧಾರ (ಆದಿಯನಾದಿ?) ಆತ್ಮ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆದಿಯಾಧಾರ (ಆದಿಯನಾದಿ?) ಆತ್ಮ ವಿವೇಕ ಅನುಭಾವ ಸಂಬಂಧವೆಂತೆಂದಡೆ; ಆದಿಯೆ ದೇಹ
ಅನಾದಿಯೆ ಆತ್ಮ. ಇಂತೀ ಆದಿಯಾಧಾರದ (ಇಂತೀ ಆದಿಯನಾದಿಯ ?) ಮೇಲಿಪ್ಪುದೆ ಪರಮಪ್ರಣವ. ಆ ಪರಮಪ್ರಣವದ ಸುವರ್ಣದ ಪ್ರಭೆಯ ಮೇಗಳ ಸೂಕ್ಷ್ಮಲಿಂಗವೆ ನಾದ ಬಿಂದು ಕಳಾತೀತವಾದ ಜೋತಿರ್ಮಯಲಿಂಗ
ದೇಹ ಮನ ಪ್ರಾಣ ಇಂದ್ರಿಯಂಗಳೆಲ್ಲವು ಆ ಲಿಂಗಕ್ಕೆ ಭಿನ್ನವೆಂಬ ಅಜ್ಞಾನಿಗಳ ಮೆಚ್ಚನು ಕೂಡಲಚೆನ್ನಸಂಗಮದೇವ.