ಆದಿಯಿಂದತ್ತತ್ತ ನೀನೆ ಅಯ್ಯಾ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯಿಂದತ್ತತ್ತ ನೀನೆ ಅಯ್ಯಾ
ಅನಾದಿಯಿಂದತ್ತತ್ತ ನೀನೆ ಅಯ್ಯಾ. ಈ ಎರಡನೂ ಮೀರಿದ ಅತ್ಯತಿಷ*ದ್ದಶಾಂಗುಲನಾದೆಯಯ್ಯಾ. `ಚತುರ್ಯುಗ ಸಹಸ್ರಾಣಿ' ಎಂಬ ಸಂಖ್ಯೆ ಯುಗಂಗಳ ಪವಣಿಸದಂದು ಕೆಸರುಗಲ್ಲನಿಕ್ಕಿ ಧರೆ ಮೇರುವ ನೆಲೆಗೊಳಿಸಿ ಅಂಡಜ ಉತ್ಪತ್ಯವಾಗದಂದು ಆತನಂತುವ ನೀನೆ ಬಲ್ಲೆ ನಿನ್ನಂತುವನಾತನೆ ಬಲ್ಲ. ನಿಮ್ಮಿಬ್ಬರ ಮಹಿಮೆಯ ನಾನೆತ್ತ ಬಲ್ಲೆನಯ್ಯಾ ಕೂಡಲಚೆನ್ನಸಂಗಮದೇವಾ