ಆದಿಯ ಶರಣನೊಬ್ಬನ ಮದುವೆಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯ ಶರಣನೊಬ್ಬನ ಮದುವೆಯ ಮಾಡಲು
ಯುಗ ಜುಗದವರೆಲ್ಲಾ ನಿಬ್ಬಣ ಹೋದರು
ಹೋದ ನಿಬ್ಬಣಿಗರು ಮರಳರು ! ಮದುವಣಿಗನ ಸುದ್ದಿಯನರಿಯಲು ಬಾರದು. ಹಂದರವಳಿಯದು
ಹಸೆ ಮುನ್ನಲುಡುಗದು ! ಬಂದಬಂದವರೆಲ್ಲಾ ಮಿಂದುಂಡು ಹೋದರು. [ಇದರಂತುವನರಿಯದೆ ಜಗವೆಲ್ಲ ಬರಡಾಯಿತ್ತು] ಇದರಂತುವನರಿದಡೆ- ಗುಹೇಶ್ವರಶಬ್ದವನೊಳಕೊಂಡ ಮಹಂತ ಬಯಲು !