ಆದಿಯ ಸಂಗದಲಾದವನ ದೇವರೆಂದೆನ್ನೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿಯ ಸಂಗದಲಾದವನ ದೇವರೆಂದೆನ್ನೆ
ಸಂಗಸುಖದಲಿಪ್ಪವನ ದೇವರೆಂದೆನ್ನೆ
ಶಕ್ತಿಸಂಪುಟವಾದವನ ದೇವೆರೆಂದೆನ್ನೆ
ಇಬ್ಬರಸಂಗದಲಾದವನ ದೇವರೆಂದೆನ್ನೆ
ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯವುಳ್ಳವನ ದೇವರೆಂದೆನ್ನೆ
ಸಗುಣ ನಿರ್ಗುಣಗಳಿಗೆ ಮಿಗೆ ಮಿಗೆಯಾಗಿ ತೋರುವ ಪರಮಾವ್ಯಯ ನೀನಾದ ಕಾರಣ
ನಿರವಯಲಿಂಗವೆಂದೆ; ನಿಃಕಲಪರಬ್ರಹ್ಮವೆಂದೆ
ಏಕಮೇವನದ್ವಿತೀಯ ಪರಾತ್ಪರವೆಂದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.