ಆದಿ ಅನಾದಿಗಳೇನೂ ಇಲ್ಲದ
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆದಿ ಅನಾದಿಗಳೇನೂ ಇಲ್ಲದ ನಿರುಪಮಲಿಂಗದಲ್ಲಿ ಅನುಪಮಭಕ್ತಿ ಜನಿಸಿತ್ತು ನೋಡ. ಆ ಭಕ್ತಿಯ ಗರ್ಭದಲ್ಲಿ ಸತ್ಯಶರಣನುದಯಿಸಿದನು. ಇದು ಕಾರಣ
ಅನಾದಿ ಕೇವಲ ಮುಕ್ತನೇ ಶರಣನೆಂಬ ವಾಕ್ಯ ಸತ್ಯ ಕಂಡಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.