ಆದಿ ಅನಾದಿಯಿಲ್ಲದಂದು, ಮಹಾಬಯಲು
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆದಿ ಅನಾದಿಯಿಲ್ಲದಂದು
ಮಹಾಬಯಲು ಬೆಳಗಿಲ್ಲದಂದು ನಿಜಪ್ರಸಾದವ ತೋರಿಸಾ. ನಾದವನೆ ಬಯಲು ನುಂಗಿ
ಬಯಲನೆ ಕಳೆ ನುಂಗಿ ಹೊಳೆವ ಲಿಂಗವಿದೆಲ್ಲಿಯದೊ ? ಪ್ರಸಾದಿಯ ಪ್ರಸಾದ ಮುಟ್ಟಿದಲ್ಲದೆ ಲಿಂಗಾರ್ಪಿತಕ್ಕೆ ಸಲ್ಲದು
ಜಗಕ್ಕೆ ಪ್ರಸಾದಿಗಳೆಂತಪ್ಪರೊ ? ಅನಾದಿಯ ಸೋಂಕಿಲ್ಲದ ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಅನಂತ ಕುಳರಹಿತನು.