ಆದಿ ಅನಾದಿ ಆತ್ಮವಿವೇಕ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿ ಅನಾದಿ ಆತ್ಮವಿವೇಕ ಅನುಭಾವಸಂಬಂಧ ಎಂತಿಪ್ಪುದೆಂದಡೆ; ಆದಿಯೆ ದೇಹ
ಅನಾದಿಯೆ ಆತ್ಮ. ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ. ಆ ಪರಮಪ್ರಣವದ ಪರಮಪ್ರಕಾಶವೆ ಚಿಚ್ಭಕ್ತಿ. ಆ ಚಿಚ್ಭಕ್ತಿಯ ಸುವರ್ಣಪ್ರಭೆಯ ಮೇಲಣ ಪರಮನಾದವೆ ಸುನಾದ ಬ್ರಹ್ಮ. ಆ ಸುನಾದಬ್ರಹ್ಮದ ಮೇಲಣ ಸೂಕ್ಷ್ಮಲಿಂಗವೆ ನಾದಬಿಂದು ಕಳಾತೀತವಾದ ಜ್ಯೋತಿರ್ಮಯಲಿಂಗ. ಆ ಲಿಂಗದಿಂದೊಗೆದ ದೇಹೇಂದ್ರಿಯ ಮನಃ ಪ್ರಾಣಾದಿಗಳೆಲ್ಲ ಆ ಲಿಂಗದ ಉಪಕರಣಂಗಳಾದ ಕಾರಣ ಆ ಮನಃ ಪ್ರಾಣಾದಿಗಳೆಲ್ಲ ಆ ಪರವಸ್ತುವಿಗೆ ಭಿನ್ನವೆಂಬ ಅಜ್ಞಾನಿಯ ಮೆಚ್ಚ ಕೂಡಲಚೆನ್ನಸಂಗಯ್ಯ.