Library-logo-blue-outline.png
View-refresh.svg
Transclusion_Status_Detection_Tool

ಆದಿ ಮಧ್ಯಾವಸಾನವಿಲ್ಲದಂದು, ಆದಿ

ವಿಕಿಸೋರ್ಸ್ ಇಂದ
Jump to navigation Jump to search



Pages   (key to Page Status)   


ಆದಿ ಮಧ್ಯಾವಸಾನವಿಲ್ಲದಂದು
ಆದಿ ಅನಾದಿ
ಬಿಂದು ಕಳೆಗಳಿಲ್ಲದಂದು
ಸಾವಯ
ನಿರವಯವಿಲ್ಲದಂದು
ತತ್ವ ಬ್ರಹ್ಮಾಂಡಾದಿ ಲೋಕಾದಿ ಲೋಕಂಗಳೇನುಯೇನೂ ಇಲ್ಲದಂದು; ನಿತ್ಯ ನಿರಂಜನ ಪರವಸ್ತು ನೀನೊರ್ಬನೆಯಿದ್ದೆಯಲ್ಲ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.