ಆದಿ ಮಧ್ಯ ಅವಸಾನವಿಲ್ಲದುದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿ ಮಧ್ಯ ಅವಸಾನವಿಲ್ಲದುದ ವೇದಿಸುವಡೆ ವೇದ್ಯಂಗರಿದು
ಸಾಧಿಸುವ ಸಾಧಕಂಗಲ್ಲದೆ. ವಾದಿಯಲ್ಲ ಪರವಾದಿಯಲ್ಲ
ಸಾಧಕನಲ್ಲ ಧರ್ಮದ ಬೋಧಕನಲ್ಲ. ಗಡಣವಿಲ್ಲದ ನುಡಿಯನು ಎಡಬಲನೆಂದರಿಯನು
ನಿಸ್ಸಂಗಿ ಶೂನ್ಯಸ್ಥಾನದಲ್ಲಿ ಸುಖಿಯಾಗಿಪ್ಪನು. ದೇವನಲ್ಲ ಮಾನವನಲ್ಲ
ಕೂಡಲಚೆನ್ನಸಂಗನಲ್ಲಿ ಸಯವಾದ ಲಿಂಗೈಕ್ಯನು.