ಆದಿ ಸ್ವಯಂಭುವಿಲ್ಲದ ಮುನ್ನ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆದಿ ಸ್ವಯಂಭುವಿಲ್ಲದ ಮುನ್ನ
ಸಂಗನಿಸ್ಸಂಗವಿಲ್ಲದ ಮುನ್ನ
ನಕ್ಷತ್ರಗ್ರಹಂಗಳಿಲ್ಲದ ಮುನ್ನ
ಯೋಗ ಕರಣಂಗಳಿಲ್ಲದ ಮುನ್ನ
ಖೇಚರ ಭೂಚರರಿಲ್ಲದ ಮುನ್ನ
ಆರಾರೂ ಇಲ್ಲದ ಮುನ್ನ
ಆಕಾಶ ಮಾರುತರಿಲ್ಲದ ಮುನ್ನ
ಅಂಬುಧಿ ಕಮಠರಿಲ್ಲದ ಮುನ್ನ_ ಹರಿಬ್ರಹ್ಮಾದಿಗಳಾರ ನಿಲವಿಲ್ಲದ ಮುನ್ನ ಹಿಮಕರದಿನಕರ ಸುಳುಹಿಲ್ಲದ ಮುನ್ನ_ ಹಿಂದಿಲ್ಲ ಮುಂದಿಲ್ಲ ಒಂದೂ ಇಲ್ಲದ ಮುನ್ನ
ಗುಹೇಶ್ವರನಿರ್ದ ತನ್ನ ತಾನರಿಯದಂತೆ