ಆದ್ಯರ ವಚನ ಪರುಷವೆಂಬೆನು
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆದ್ಯರ ವಚನ ಪರುಷವೆಂಬೆನು, ಆ ಪರುಷವೆನಗೆಂತು ದೊರೆಕೊಂಬುದಯ್ಯಾ ತನು ಮನ ಧನವ ವಿವರಿಸಿ ನುಡಿವೆ ಸೋಂಕಿಂಗೆ ಸೈರಿಸಲಾರೆ, ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ, ಕೂಡಲಸಂಗಮದೇವಾ. 313
ಆದ್ಯರ ವಚನ ಪರುಷವೆಂಬೆನು
ಆ ಪರುಷವೆನಗೆಂತು ದೊರೆಕೊಂಬುದಯ್ಯಾ ತನು ಮನ ಧನವ ವಿವರಿಸಿ ನುಡಿವೆ ಸೋಂಕಿಂಗೆ ಸೈರಿಸಲಾರೆ
ಹೊಲೆಯರ ಮದ್ದಳೆಯಂತೆ ನುಡಿವ ಡಂಬಕ ನಾನಯ್ಯಾ
ಕೂಡಲಸಂಗಮದೇವಾ. 313