Library-logo-blue-outline.png
View-refresh.svg
Transclusion_Status_Detection_Tool

ಆಧಾರಶಕ್ತಿ ಅನಾದಿಪುರುಷನ ಕೂಡಲು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಆಧಾರಶಕ್ತಿ ಅನಾದಿಪುರುಷನ ಕೂಡಲು ತ್ರೆ ೈಜಗದುತ್ಪತ್ತಿಯಾಯಿತ್ತು ನೋಡಾ. ತ್ರೆ ೈಜಗಹುಟ್ಟುವುದಕ್ಕತ್ತ ಮುನ್ನ ತಾ ಹುಟ್ಟಿದೆನೆಂದರಿಯಬಲ್ಲರೆ ಮೂರುಲೋಕದ ಉತ್ಪತ್ತಿ ಸ್ಥಿತಿ ಪ್ರಳಯದೊಳಗಲ್ಲ. ಆ ಪ್ರಳಯವಿರಹಿತನಾದಾತನೆ ಅಚ್ಚ ಶರಣನು. ಆತ ನಿತ್ಯ ನಿರಂಜನನು. ಆ ಮಹಾತ್ಮನನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.