ಆಧಾರಾಧೇಯ ಸೊಮ್ಮು ಸಂಬಂಧವಿಲ್ಲದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಧಾರಾಧೇಯ ಸೊಮ್ಮು ಸಂಬಂಧವಿಲ್ಲದ ಪ್ರಸಾದಿ
ಭೋಗ ಅಭೋಗಂಗಳ ಸಾರಾಯವಿಲ್ಲದ ಪ್ರಸಾದಿ
ಕ್ರಿಯಾಮೋಹಿತದ
ನಿಃಕ್ರಿಯಾನಿರ್ಮೋಹಿತದ
ಎರಡರ ಭೇದವನು ಶರೀರಾರ್ಥಕ್ಕೆ ಹೊದ್ದಲೀಯದೆ ಜಂಗಮದಲ್ಲಿ ನಿವೇದಿಸಿ ಲಿಂಗಲೀಯವಾದ ಪ್ರಸಾದಿ
ಚತುಷ್ಟಯಂಗಳ ಜಿಹ್ವಕ್ಕೆ ತಲೆದೋರದ ಪ್ರಸಾದಿ. ಇದು ಕಾರಣ_ಕೂಡಲಚೆನ್ನಸಂಗಯ್ಯಾ
ಸರ್ವಾಂಗಲೀಯವಾದ ಪ್ರಸಾದಿ.