ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡುಚಕ್ರಂಗಳ ಚತುರ್ದಳ ಚತುಕ್ಷರ
ಷಡುದಳ ಷಡಕ್ಷರ
ದಶದಳ ದಶಾಕ್ಷರ
ದ್ವಾದಳದಳ ದ್ವಾದಶಾಕ್ಷರ
ಷೋಡಶದಳ ಷೋಡಶಾಕ್ಷರ
ದ್ವಿದಳ ದ್ವ ್ಯಯಾಕ್ಷರವೆಂಬ
ಚಕ್ರ ದಳ
ಅಕ್ಷರಂಗಳೆಲ್ಲವು ಬಯಲಾದವು ನೋಡಾ. ಪೀತ ಹರಿತ ಮಾಂಜಿಷ* ಶ್ವೇತ ಕಪೋತವರ್ಣಮುಖ್ಯವಾದ ಸಮಸ್ತವರ್ಣಂಗಳೆಲ್ಲ ಬಯಲಾದವು ನೋಡಾ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಾಧಿದೇವತೆಗಳು ಬಯಲಾದರು ನೋಡಾ. ಅದೆಂತಡೆಂದಡೆ: ಬ್ರಹ್ಮ ವಿಷ್ಣುವಿನಲ್ಲಡಗಿ
ವಿಷ್ಣು ರುದ್ರನಲ್ಲಡಗಿ
ರುದ್ರ ಈಶ್ವರನಲ್ಲಡಗಿ
ಈಶ್ವರ ಸದಾಶಿವನಲ್ಲಡಗಿ
ಸದಾಶಿವ ಚಿತ್ತಿನಲ್ಲಡಗಿ
ಆ ಚಿತ್ ಸ್ವರೂಪವಪ್ಪ ಆದಿಶರಣನೆ ಮಹಾಲಿಂಗದೊಳಡಗಿ
ನಿರ್ವಯಲಾದುದೆ ಇವರೆಲ್ಲರ ಬಯಲು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.