ಆನು
ನೀನು
ಅರಿದೆ ಮರೆದೆ
ಅಳಿದೆನುಳಿದೆನೆಂಬ ಸಂಶಯ ಭ್ರಮೆ
ಅತತ್ವ ತತ್ವವಿವೇಕಭ್ರಮೆ
ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ
ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ ಆದಿಯಾದ ಸಪ್ತಕರ್ಮ ಬಂಧಭ್ರಮೆ
ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ
ಯೋಗದಾಸೆ ಸಿಲುಕುಭ್ರಮೆ
ಅಂತರ್ಮುಖಭ್ರಮೆ ಬಹಿರ್ಮುಖಭ್ರಮೆ
ಅನೃತಭ್ರಮೆ ಸತ್ಯಭ್ರಮೆ ನಿತ್ಯಭ್ರಮೆ
ವಾಗದ್ವೈತಭ್ರಮೆ
ಅದ್ವೈತಭ್ರಮೆ
ಮಂತ್ರಭ್ರಮೆ ತಂತ್ರಭ್ರಮೆ
ನಾಹಂ ಭ್ರಮೆ
ಕೋಹಂ ಭ್ರಮೆ
ಸೋಹಂ ಭ್ರಮೆ. ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ. ಕೂಡಲಚೆನ್ನಸಂಗಾ ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.