ಆಪ್ತಮಿತ್ರ - ಕಾಲವನ್ನು ತಡೆಯೋರು
- ಚಿತ್ರ: ಆಪ್ತಮಿತ್ರ
- ಸಂಗೀತ: ಗುರುಕಿರಣ್
- ಸಾಹಿತ್ಯ: ಚಿ . ಉದಯಶಂಕರ್
- ನಿರ್ದೇಶನ: ಪಿ . ವಾಸು
- ಗಾಯಕರು: ಹರಿಹರನ್ ,ಗುರುಕಿರಣ್
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ
ಊರೊಂದು ಏತಕೆ ಬೇಕು, ಮನೆಯೊಂದು ಏಕಿರಬೇಕು
ಎಲ್ಲಿರಲಿ ನಮ್ಮ ಊರದೇ,ನಮಗಿಲ್ಲಿ ಯಾರ ಹಂಗಿದೆ
ಬಾಳೆಲ್ಲ ಆನಂದ ಒಂದೇ
ನಾ ಹೃದಯಾ ಕಡಿಯುವ ಕಳ್ಳಾ ,ಅನ್ಯಾಯ ಒಡೆಯುವ ಕುಳ್ಳಾ
ಜೊತೆಯಾಗಿ ನಾವು ಬಂದರೆ ಒಂದಾಗಿ ನಾವು ನಿಂತರೇ
ಎದುರಲ್ಲಿ ನಿಲ್ಲೋರು ಯಾರೂ
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ
ಏನೊಂದು ಕೆಳದು ನಮಗೆ, ಬೇರೇನೂ ಬೇಡವು ನಮಗೇ
ಈ ಸ್ನೇಹ ನಮಗೆ ದೇವರು,ಇನ್ನ್ಯಾರು ನಮಗೆ ಕಾಣರು
ನಮಗಿನ್ನೂ ಸರಿಸಾಟಿ ಯಾರೂ
ಎಂದೆಂದೂ ಮುಗಿಯದೆ ಇರಲಿ, ಈ ಪಯಣಾ ಸಾಗುತಲಿರಲಿ
ನಗುನಗುತಾ ಹೀಗೆ ಬಾಳುವಾ,ಒಂದಾಗಿ ಮುಂದೆ ಹೋಗುವಾ
ಹಾಯಾಗಿ ಜೊತೆಯಾಗಿ ನಾವು
ಕಾಲವನ್ನು ತಡೆಯೋರು ಯಾರು ಇಲ್ಲಾ
ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾ
ನನ್ನಿಂದ ನಿನ್ನಾ, ನಿನ್ನಿಂದ ನನ್ನಾ, ದೂರ ಮಾಡಲು ಎಂದೂ ಆಗೊಲ್ಲಾ