ವಿಷಯಕ್ಕೆ ಹೋಗು

ಆಯತಲಿಂಗದಲ್ಲಿ ಅಂಗಗುಣವಳಿದು ಸರ್ವಾಂಗವನು

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಆಯತಲಿಂಗದಲ್ಲಿ ಅಂಗಗುಣವಳಿದು ಸರ್ವಾಂಗವನು ಲಿಂಗನಿಷೆ*ಯಲ್ಲಿ ಘಟ್ಟಿಗೊಳಿಸಿ ಲಿಂಗಾಂಗಸಂಗದಲ್ಲಿ ನಿರತನು ನೋಡಾ. ಸ್ವಾಯತಲಿಂಗದಲ್ಲಿ ಮನ ವೇದ್ಯವಾಗಿ ಮನೋಮಾಯವನಳಿದ ನಿರ್ಮಾಯ ನಿರಾಕುಳನು ಮಾಯಾಪ್ರಪಂಚಿನೊಳಗೆ ಚರಿಸದ ಪ್ರಾಣಲಿಂಗನಿಷ*ನು ನೋಡಾ. ಸನ್ನಿಹಿತಲಿಂಗದಲ್ಲಿ ತನ್ನನಳಿದು ತಾನೆಂಬುವ ಭಾವವೇನೂ ತೋರದ ಮಹಾನುಭಾವಿಯ ನೋಡಾ. ತಾನೆಂಬುದೇನೂ ಇಲ್ಲವಾಗಿ
ನೀನೆಂಬುದು ಇಲ್ಲ; ನಾನು ನೀನೆಂಬುದು ಇಲ್ಲವಾಗಿ
ಲಿಂಗವೆ ಸರ್ವಮಯವಾಗಿಪ್ಪುದು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.