ಆರಾದಡೆಯೂ ನಿಮ್ಮ ನೆನೆವರಯ್ಯಾ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆರಾದಡೆಯೂ ನಿಮ್ಮ ನೆನೆವರಯ್ಯಾ
ನಾ ನಿಮ್ಮ ನೆನೆವನಲ್ಲ. ಅದೇನು ಕಾರಣವೆಂದಡೆ; ನೆನೆವ ಎನ್ನ ಮನ ನೀವೆಯಾದಿರಾಗಿ. ಆರಾದಡೆಯೂ ನಿಮ್ಮ ಪೂಜಿಸುವರಯ್ಯಾ
ನಾ ನಿಮ್ಮ ಪೂಜಿಸುವನಲ್ಲ. ಅದೇನು ಕಾರಣವೆಂದೆಡೆ; ಎನ್ನ ತನುವಿಂಗೆ ನೀವೆ ಪೂಜೆಯಾದಿರಾಗಿ. ಆರಾದಡೆಯೂ ನಿಮಗರ್ಪಿಸುವರಯ್ಯಾ
ನಾ ನಿಮಗರ್ಪಿಸುವನಲ್ಲ. ಅದೇನು ಕಾರಣವೆಂದಡೆ ಎನ್ನ ಸರ್ವಾಂಗವೂ ನಿಮಗರ್ಪಿತವಾಯಿತ್ತಾಗಿ. ಇದು ಕಾರಣ_ಭಕ್ತದೇಹಿಕದೇವ ದೇವದೇಹಿಕಭಕ್ತನೆಂಬ ಶ್ರುತಿಯನರಿದು
ನಿಮ್ಮ ಮುಟ್ಟಿ ಅಭಿನ್ನನಾದೆನು
ಕೂಡಲಚೆನ್ನಸಂಗಮದೇವಾ.