ವಿಷಯಕ್ಕೆ ಹೋಗು

ಆರು ಅಂಕಣದೊಳಗಾರು ದರುಶನ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಆರು ಅಂಕಣದೊಳಗಾರು ದರುಶನ ಪೂಜೆ
ಆರೂಢರೂಢಾದಿಯೋಗಿಗಳಿರುತ್ತಿರಲು
ಆರಾರಿಂದತ್ತತ್ತ ವಿೂರಿ ತೋರುವ ಸ್ವಯಂಜ್ಯೋತಿ ಇರಲು
ಬೇರೆಯರಸಲುಂಟೆ ಶಿವಯೋಗವು ? ಆರು ಅಂಕಣದೊಳಗೆ ಆರು ಮಂದಿಯ ಸಂದಣಿಯ ಓಲಗದ ಸಡಗರವೆಂದು ಆರೂಢ ಯೋಗಿಗಳದನೆಣಿಕೆಗೊಳರು. ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರವಲ್ಲವಾಗಿ ವಿೂರಿ ಒಂಬತ್ತು ಗೊಪೆಯೊಳು ಲಯ ಗಮನ ಸ್ಥಿತ್ಯರ್ಥಂಗಳ ಹಂಗಿಲ್ಲದ ಹಂಗಿನಲ್ಲಿ ನೀನು ನಿನ್ನಲ್ಲಿ ಪತಂಗನ್ಯಾಯದಂತೆ ಗುಹೇಶ್ವರನೊಳೊಂದು ಕಂಡಾ.