ಆರು ಚಕ್ರದಲ್ಲಿ ಅರಿದಿಹೆನೆಂಬ

ವಿಕಿಸೋರ್ಸ್ದಿಂದ



Pages   (key to Page Status)   


ಆರು ಚಕ್ರದಲ್ಲಿ ಅರಿದಿಹೆನೆಂಬ ಅಜ್ಞಾನ ಜಡರುಗಳು ನೀವು ಕೇಳಿರೊ ! ಅದೆಂತೆಂದಡೆ : ಆಧಾರಚಕ್ರ ಪೃಥ್ವಿ ಸಂಬಂಧ
ಅಲ್ಲಿಗೆ ಬ್ರಹ್ಮನಧಿದೇವತೆ
ಆಚಾರ ಲಿಂಗವ ಪಿಡಿದು ಯೋಗಿಯಾಗಿ ಸುಳಿದ ! ಸ್ವಾದಿಷಾ*ನ ಚಕ್ರ ಅಪ್ಪುವಿನ ಸಂಬಂಧ
ಅಲ್ಲಿಗೆ ವಿಷ್ಣು ಅಧಿದೇವತೆ
ಗುರುಲಿಂಗವ ಪಿಡಿದು ಜೋಗಿಯಾಗಿ ಸುಳಿದ ! ಮಣಿಪೂರಕಚಕ್ರ ಅಗ್ನಿಯ ಸಂಬಂಧ
ಅಲ್ಲಿಗೆ ರುದ್ರನಧಿದೇವತೆ
ಶಿವಲಿಂಗವ ಪಿಡಿದು ಶ್ರವಣನಾಗಿ ಸುಳಿದ ! ಅನಾಹತಚಕ್ರ ವಾಯು ಸಂಬಂಧ
ಅಲ್ಲಿಗೆ ಈಶ್ವರನಧಿದೇವತೆ
ಜಂಗಮಲಿಂಗವ ಪಿಡಿದು ಸನ್ಯಾಸಿಯಾಗಿ ಸುಳಿದ ! ವಿಶುದ್ಧಿಚಕ್ರ ಆಕಾಶ ಸಂಬಂಧ
ಅಲ್ಲಿಗೆ ಸದಾಶಿವನಧಿದೇವತೆ
ಪ್ರಸಾದಲಿಂಗವ ಪಿಡಿದು ಕಾಳಾಮುಖಿಯಾಗಿ ಸುಳಿದ ! ಆಜ್ಞಾಚಕ್ರ ಪರತತ್ತ್ವ ಸಂಬಂಧ ಅಲ್ಲಿಗೆ ಪರಶಿವನಧಿದೇವತೆ
ಮಹಾಲಿಂಗವ ಪಿಡಿದು ಪಾಶುಪತಿಯಾಗಿ ಸುಳಿದ ! ಇಂತೀ ಆರುದರುಶನಂಗಳು ಬಂದಡೆ ಅಂಗಳವ ಹೋಗಲೀಸಿರಿ ! ಆ ಲಿಂಗ ನಿಮಗೆಂತಪ್ಪವು ? ಇದು ಕಾರಣ
ಮುಂದಿರ್ದ ಗುರುಲಿಂಗಜಂಗಮದ ತ್ರಿವಿಧ ಸಂಬಂಧವನರಿಯದೆ ಷಟ್ಸ್ಥಲದಲ್ಲಿ ತೃಪ್ತರಾದೆವೆಂಬ ಭ್ರಷ್ಟರ ನೋಡಾ ಗುಹೇಶ್ವರಾ !