ವಿಷಯಕ್ಕೆ ಹೋಗು

ಆಳವರಿಯದ ಭಾಷೆ, ಬಹುಕುಳವಾದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಆಳವರಿಯದ ಭಾಷೆ
ಬಹುಕುಳವಾದ ನುಡಿ_ ಇಂತೆರಡರ ನುಡಿ ಹುಸಿಯಯ್ಯಾ. ಬಹು ಭಾಷಿತರು; ಸುಭಾಷಿತ ವರ್ಜಿತರು. `ಶರಣಸತಿ ಲಿಂಗಪತಿ' ಎಂಬರು ಹುಸಿಯಯ್ಯಾ. ಇಂತಪ್ಪವರ ಕಂಡು ನಾನು ನಾಚಿದೆನಯ್ಯಾ ಗುಹೇಶ್ವರಾ.