ಆವಲ್ಲಿ ಸರ್ವಪ್ರಪಂಚು ನಿವೃತ್ತಿಯಾಗಿಹುದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆವಲ್ಲಿ ಸರ್ವಪ್ರಪಂಚು ನಿವೃತ್ತಿಯಾಗಿಹುದು
ಅದೀಗ ಬ್ರಹ್ಮಜ್ಞಾನ. ಆವಲ್ಲಿ ಕೇವಲ ನಿಶ್ಚಿಂತವಾಗಿಹುದು
ಅದೀಗ ಬ್ರಹ್ಮಜ್ಞಾನ. ಆವಲ್ಲಿ ತಾನೆಂಬ ತೋರಿಕೆ ಹುಟ್ಟದಿಹುದು
ಅದೀಗ ಬ್ರಹ್ಮಜ್ಞಾನ. ಆವಲ್ಲಿ ಕೂಡಲಚೆನ್ನಸಂಗಯ್ಯನಲ್ಲದೆ ಪೆರತೊಂದನರಿಯದಿಹುದು ಅದೀಗ ಬ್ರಹ್ಮಜ್ಞಾನವಯ್ಯಾ