ಆಸನಬಂಧನರು ಸುಮ್ಮನಿರರು. ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ? ಸತ್ಯವನೆ ಮರೆದು ಅಸತ್ಯವನೆ ಹಿಡಿದು ಸತ್ತುಹೋದರು ಗುಹೇಶ್ವರಾ.