ಆ ಲಿಂಗವೆ ಅಮಳೋಕ್ಯವಾದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆ ಲಿಂಗವೆ ಅಮಳೋಕ್ಯವಾದ ಬಳಿಕ ಆ ಲಿಂಗವೆ ಮುಖಸೆಜ್ಜೆಯಾದ ಬಳಿಕ ಆ ಲಿಂಗವೆ ಭುಜಂಗನಾಗವಟ್ಟಿಗೆಯಾದ ಬಳಿಕ ಆ ಮಹಿಮನೆ ಪ್ರಾಣನಾಥನಾದ ಬಳಿಕ
ಇದಿರಿಟ್ಟು ಕೇಳಲುಂಟೆ ? ಅಂಗಲಿಂಗಸಂಬಂಧಿ ಶಿವಶರಣರ ಅಂಘ್ರಿಯಲ್ಲಿ ಇರಿಸಾ ಎನ್ನ
ಕೂಡಲಚೆನ್ನಸಂಗಮದೇವಾ.