ವಿಷಯಕ್ಕೆ ಹೋಗು

ಇಂತೀ ಹಿಂದೆ ಹೇಳಿದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಇಂತೀ ಹಿಂದೆ ಹೇಳಿದ ವಸ್ತುವ ಬೇರಿಟ್ಟು ತಿಳಿಯಲಿಲ್ಲ. ನಿನ್ನಲ್ಲಿ ಉಂಟು ತಿಳಿದು ನೋಡಯ್ಯ ಮಗನೆ. ನಿನ್ನ ಪಿಂಡದ ಹೊರಗೆ ಭರಿತವಾಗಿ. ತಲೆದೋರದೆ
ಕಾಣಿಸಿಕೊಳ್ಳದೆ ಪಿಂಡಸ್ಥನಾಗಿ ಚಿದ್ರೂಪನದಾನೆ. ಈ ಪಿಂಡಸ್ಥಲದ ಭೇದವ ತಿಳಿಯೆಂದನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.