Library-logo-blue-outline.png
View-refresh.svg
Transclusion_Status_Detection_Tool

ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ
ಬಹಿರಂಗದಲ್ಲಿ ಅಂಗದ ಮೇಲೆ ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ. ಎಷ್ಟು ಅರುಹಾದರೂ ಅಂಗದಮೇಲೆ ಶಿವಲಿಂಗಧಾರಣವಿಲ್ಲದಿರ್ದಡದು ಅರುಹಲ್ಲ; ಅದು ನಮ್ಮ ಪುರಾತನರ ಮತವಲ್ಲ. ಸಾಕ್ಷಾತ್ ಪರಮೇಶ್ವರನಾದರೂ ಆಗಲಿ
ಅಂಗದಮೇಲೆ ಲಿಂಗಧಾರಣವಿಲ್ಲದಿದ್ದರೆ
ಅವನ ಮುಖವ ನೋಡಲಾಗದು ಕಾಣ. ಅದೇನು ಕಾರಣವೆಂದರೆ: ಅದು ಶಿವಾಚಾರದ ಪಥವಲ್ಲದ ಕಾರಣ. ಗುರುಕರುಣದಿಂದ ಪಡೆದ ಲಿಂಗವ ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.