ಇಂತು ಕ್ರೀಯಿಲ್ಲದೆ ಜ್ಞಾನ ಪ್ರಯೋಜನವಿಲ್ಲ; ಜ್ಞಾನವಿಲ್ಲದೆ ಕ್ರೀ ಪ್ರಯೋಜನವಿಲ್ಲವಯ್ಯ ಅದು ಹೇಂಗೆಂದರೆ: ದೇಹವಿಲ್ಲದೆ ಪ್ರಾಣಕ್ಕೆ ಆಶ್ರಯವುಂಟೆ ಅಯ್ಯ? ಪ್ರಾಣವಿಲ್ಲದೆ ಕಾಯಕ್ಕೆ ಚೈತನ್ಯವುಂಟೆ ಅಯ್ಯ? ಕ್ರೀಯಿಲ್ಲದೆ ಜ್ಞಾನಕ್ಕೆ ಆಶ್ರಯವಿಲ್ಲ. ಜ್ಞಾನವಿಲ್ಲದೆ ಕ್ರೀಗೆ ಆಶ್ರಯವಿಲ್ಲ. ಕ್ರಿಯಾಜ್ಞಾನಪ್ರಕಾಶವಿಲ್ಲದೆ ಲಿಂಗಕ್ಕಾಶ್ರಯವಿಲ್ಲ. ಇದು ಕಾರಣ
ಜ್ಞಾನ ಸತ್ಕಿ ್ರಯೋಪಚಾರವಿರಬೇಕೆಂದಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.