ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ
ಚಕೋರನ ಧ್ಯಾನವೆಂತಿಪ್ಪದು
_ಅಂತಾಗಿದ್ದೆ ನಾನು. ಮಾತೆ ವಿಯೋಗವಾದ ಶಿಶುವಿನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬಂಧನದಲ್ಲಿ ಸಿಕ್ಕಿದ ಫಣಿಯ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ರಾತ್ರಿಯೊಳು ಮುಗಿದ ಪದ್ಮದ ಭ್ರಮರನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ ಮದಹಸ್ತಿ ಎಂತಿಪ್ಪುದು_ಅಂತಾಗಿದ್ದೆ ನಾನು. ನೋಟವಗಲಿದ ನೇಹದ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು. ಗುಹೇಶ್ವರಲಿಂಗವೆ ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ ಏನೆಂದರಿಯದಿದ್ದೆ ನಾನು.