ಇಂದ್ರಚಂದ್ರರು ಹೋದಡು ಪ್ರಳಯವಾಗಿ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಇಂದ್ರಚಂದ್ರರು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ಹರಿವಿರಿಂಚಿಗಳು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ದೇವ ದಾನವ ಮಾನವರು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ಮನುಮುನಿಗಳು ಪ್ರಳಯವಾಗಿ ಹೋದಡು ಶರಣನೇನೆಂದರಿಯನು. ಪಂಚತತ್ತ್ವ ಬ್ರಹ್ಮಾಂಡಕೋಟಿಗಳು ಪ್ರಳಯವಾಗಿ ಹೋದಡು ಅಖಂಡೇಶ್ವರಾ
ನಿಮ್ಮ ಶರಣನೇನೆಂದರಿಯನಯ್ಯಾ.