ಇಂದ್ರನೀಲದ ಗಿರಿಯನೇರಿಕೊಂಡು ಚಂದ್ರಕಾಂತದ

ವಿಕಿಸೋರ್ಸ್ ಇಂದ
Jump to navigation Jump to search
Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಇಂದ್ರನೀಲದ ಗಿರಿಯನೇರಿಕೊಂಡು ಚಂದ್ರಕಾಂತದ ಶಿಲೆಯನಪ್ಪಿಕೊಂಡು ಕೊಂಬ ಬಾರಿಸುತ್ತ ಎಂದಿಪ್ಪೆನೊ ಶಿವನೆ ? ನಿಮ್ಮ ನೆನೆವುತ್ತ ಎಂದಿಪ್ಪೆನೊ ? ಅಂಗಭಂಗ ಮನಭಂಗವಳಿದು ನಿಮ್ಮನೆಂದಿಂಗೊಮ್ಮೆ ನೆರೆವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?