ಇಂದ್ರಿಯಂಗಳಿಗೊಂದೊಂದು ಮಾತ ಕಲಿತು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಂದ್ರಿಯಂಗಳಿಗೊಂದೊಂದು ಮಾತ ಕಲಿತು ಬಹಳವ ಬಲ್ಲೆವು
ಬ್ರಹ್ಮಜ್ಞಾನಿಗಳೆಂದು ನುಡಿದುಕೊಂಡು ನಡೆಯಬಲ್ಲರಲ್ಲದೆ
ಸಾವನರಿದಿಹೆನೆಂದರೆ ದೇವತಾದಿಗಳಿಗಳವಲ್ಲ ಕಾಣಿರಣ್ಣ. ದೇವರಮೂರ್ತಿಯ ಭಾವದಲ್ಲಿ ಕಂಡಲ್ಲದೆ ಭವದುಃಖ ಹಿಂಗವು ನೋಡ. ಭವದುಃಖ ಹಿಂಗಿಸದೆ ಶಿವಾನುಭವವೇಕೆ ಹೇಳಿರೇ? ಹುಸಿಯನೇ ಹೊಸೆದು
ಪಸೆಯನೇ ಕೊಚ್ಚಿ ಪಶುಪತಿಯ ಅನುಭಾವಿಗಳೆಂದು ಪ್ರಳಯಕ್ಕೊಳಗಾಗಿ ಹೋದರು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.