ಇಂದ್ರಿಯವ ಬಿಟ್ಟು ಕಾಯವಿರದು ; ಕಾಯವ ಬಿಟ್ಟು ಇಂದ್ರಿಯವಿರದು. ಎಂತು ನಿಃಕಾಮಿಯೆಂಬೆ ಎಂತು ನಿರ್ದೋಷಿಯೆಂಬೆ ನೀನೊಲಿದಡೆ ಸುಖಿಯಾಗಿಪ್ಪೆ ನೀನೊಲ್ಲದಿರೆ ದುಃಖಿಯಾಗಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.