ಇದರ ಒಲೆಯಡಿಯನರುಹಿದಡೆ, ಹೊಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇದರ ಒಲೆಯಡಿಯನರುಹಿದಡೆ
ಹೊಗೆ ಗೋಳಕನಾಥನ ಕೊರಳ ಸುತ್ತಿತ್ತು
ಮಹೀತಳನ ಜಡೆ ಹತ್ತಿತ್ತು
ಮರೀಚನ ಶಿರ ಬೆಂದಿತ್ತು
ರುದ್ರನ ಹಾವುಗೆ ಉರಿಯಿತ್ತು
ದೇವಗಣಂಗಳೆಲ್ಲ ವಿತಾಪವಾದರು. ಮಡದಿಯರು ಮುಡಿಯ ಹಿಡಿದುಕೊಂಡು ಹೋದರು. ಭಸ್ಮಧಾರಿಯಾದೆ ಕಾಣಾ ಗುಹೇಶ್ವರ.