ಇದಿರಿನಲ್ಲಿ ಹೋಗಿ, ಜಂಗಮವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇದಿರಿನಲ್ಲಿ ಜಂಗಮವು ಬರುವುದು ಕಂಡು ಸದರನಿಳಿದು ನಡೆದು ಹೋಗಿ
ಚರಣಕ್ಕೆರಗುವುದೆ ಉತ್ತಮಭಕ್ತಿ ಎನಿಸಿತ್ತು. ಇದ್ದ ಸ್ಥಾನದಲ್ಲಿಯೇ ಎದ್ದು ನಿಲ್ಲುವುದೆ ಮಧ್ಯಮಭಕ್ತಿ ಎನಿಸಿತ್ತು. ಕುಳಿತಲ್ಲಿಯೇ ಕರಮುಗಿಯುವುದೆ ಕನಿಷ*ಭಕ್ತಿಯೆನಿಸಿತ್ತು. ಈ ಮೂರುತೆರದ ಭಕ್ತಿಯಿಲ್ಲದೆ ಗರ್ವದಿಂದ ಬೆರತುಕೊಂಡು ಕುಳಿತರೆ ಮುಂದೆ ಹಿರಿಯ ಶೂಲದ ಮೇಲೆ ಕುಳ್ಳಿರಿಸುವನು ನೋಡಾ ನಮ್ಮ ಅಖಂಡೇಶ್ವರ.