ಇದು ಕಾರಣ, ಎನ್ನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇದು ಕಾರಣ
ಎನ್ನ ಮಾನಸ ನಿಮ್ಮುವನೆ ನೆನೆವುತಿಪ್ಪುದು. ಎನ್ನ ವಾಚಕ ನಿಮ್ಮುವನೆ ಕೀರ್ತಿಸುತಿಪ್ಪುದು. ಎನ್ನ ಕಾಯಕ ಷಟ್‍ಕರ್ಮಂಗಳನೆಲ್ಲ ಮರೆದು ಶಿವಲಿಂಗಕೃತ್ಯವನೆ ಮಾಡುತಿಪ್ಪುದು ನೋಡಾ. ಈ ಭಾಷೆ ಮನ ಮನತಾರ್ಕಣೆಯಾಗಿ ಹುಸಿಯಲ್ಲ. ತನಗಿಲ್ಲದುದನುಂಟುಮಾಡಿಕೊಂಡು ಹುಸಿವನೇ ಶಿವಶರಣ? ಅದಲ್ಲ ಬಿಡು. ಎನ್ನ ಜಾಗರ ಸ್ವಪ್ನ ಸುಷುಪ್ತಿಯೊಳು ಶಿವ ಶಿವಾ ಶಿವ ಶಿವಾಯೆಂದು ಭವಭಾರವ ನೀಗಿ ನಾನು ಭಕ್ತನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.