ವಿಷಯಕ್ಕೆ ಹೋಗು

ಇದು ಕಾರಣ, ದೇವಗುರು

ವಿಕಿಸೋರ್ಸ್ದಿಂದ


ಲೇಖಕರು: Tomtada Siddalingeshwara ShivaYogigaLu
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಇದು ಕಾರಣ
ದೇವಗುರು ನಿರೂಪಿಸಿದ ಷಡಕ್ಷರಮಂತ್ರವನಗಲ್ದು ಹುಟ್ಟಿ ಸಾವ
ಕೆಡುವ ಮಂತ್ರತಂತ್ರಯಂತ್ರಾದಿಗಳ ಕಲಿತು ಬದುಕಿಹೆನೆಂಬ ಕಾಳ್ವಿಚಾರವ ಬಿಡು ಗಡಾ ಮನುಜರಿರ. ``ಓಂ ನಮಃ ಶಿವಾಯ ಇತಿ ಮಂತ್ರಸ್ಸರ್ವ ಮಂತ್ರ್ರಾ ಸ್ಥಾಪಯೇತ್' ಎಂಬ ಬಿರಿದು ಕಾಣಿರೋ. ಎಲ್ಲ ಮಂತ್ರಕ್ಕೂ ಶಿವಮಂತ್ರವೇ ಗುರುವೆಂದರಿಯದೆ
ಅನ್ಯನಾಮವಿಡಿದು ಬಳಲುವ ಅನಾಚಾರಿಗಳ ಕಂಡಡೆ ಎನ್ನ ಮನ ನಚ್ಚದು ಮಚ್ಚದಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.