ವಿಷಯಕ್ಕೆ ಹೋಗು

ಇನಿಗಡಲ ಅಣುಗನ ಕೂಡಿದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಇನಿಗಡಲ ಅಣುಗನ ಕೂಡಿದ ಪತಂಗನು ತಾಮಸದಿವಸವ ಮರೆದಂತೆ. ಸತ್ವಗುಣ ರಜದಲಡಗಿ
ರಜದ ಗುಣ ತಮದಲಡಗಿ
ತಮದ ಗುಣ ರುದ್ರನೊಳಡಗಿ. ರುದ್ರನ ಗುಣ ಅಕ್ಷರಾಕ್ಷರ ಪರಶಿವನೊಳಡಗಿ
ಅಕ್ಷರಾಣಿ ಚ ಮಾತ್ರಾಣಿ ಸರ್ವೇ ಬಿಂದುಸಮಾಶ್ರಿತಾಃ ಬಿಂದುರ್ಭಿದ್ಯತೇ ನಾದಾತ್ ಸುನಾದಸ್ತೇನಭಿದ್ಯತೇ ಎಂದುದಾಗಿ
ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಲ್ಲನಲ್ಲದೆ
ಅಜ್ಞಾನಿಗಳೆತ್ತ ಬಲ್ಲರು ?