ವಿಷಯಕ್ಕೆ ಹೋಗು

ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ

ವಿಕಿಸೋರ್ಸ್ದಿಂದ


ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಇಲ್ಲದ ಮಾಯೆಯನುಂಟುಮಾಡಿಕೊಂಡು ಬಲ್ಲತನಕ್ಕೆ ಬಾಯ ಬಿಡಲೇತಕೊ ? ಇಲ್ಲದ ಮಾಯೆಯ ಇಲ್ಲೆನಲರಿಯದೆ ತಲ್ಲಣಿಸಿ ಬಾಯ ಬಿಡಲೇತಕೊ ? ಎಲ್ಲವ
ತನ್ನ ತಾ ತಿಳಿದು ನೋಡಿದಡೆ ಕೂಡಲಚೆನ್ನಸಂಗಯ್ಯ ತಾನೆ ಬೇರಿಲ್ಲ.