ಇಷ್ಟಲಿಂಗಕ್ಕೆ ಶಿವಪ್ರಸಾದಿಯೆಂಬೆನು. ರೂಪುಪದಾರ್ಥವನರ್ಪಿಸಿ,

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಷ್ಟಲಿಂಗಕ್ಕೆ ರೂಪುಪದಾರ್ಥವನರ್ಪಿಸಿ
ಆ ಇಷ್ಟಲಿಂಗದಮುಖದಲ್ಲಿಯೇ ರೂಪುಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಪ್ರಾಣಲಿಂಗಕ್ಕೆ ರುಚಿಪದಾರ್ಥವನರ್ಪಿಸಿ
ಆ ಪ್ರಾಣಲಿಂಗದಮುಖದಲ್ಲಿಯೇ ರುಚಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಭಾವಲಿಂಗಕ್ಕೆ ತೃಪ್ತಿಪದಾರ್ಥವನರ್ಪಿಸಿ
ಆ ಭಾವಲಿಂಗದಮುಖದಲ್ಲಿಯೇ ತೃಪ್ತಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು. ಇಂತೀ ಭೇದವನರಿಯದೆ ಒಡಲಕಕ್ಕುತಲೆಗೆ ಒಗುಮಿಗೆ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂದು ತನು ಕೊಡಹಿ
ಮನ ಹೇಸಿ
ರಣಭೂತನಂತೆ ಕಂಡಕಂಡತ್ತ ಚೆಲ್ಲುವ ದಿಂಡೆಯ ಮೂಳ ಬಂಡ ಹೊಲೆಯರಿಗೆ ಶಿವಪ್ರಸಾದದ ಒಲುಮೆಯೆಲ್ಲಿಯದಯ್ಯ ಅಖಂಡೇಶ್ವರಾ.