ವಿಷಯಕ್ಕೆ ಹೋಗು

ಇಷ್ಟಲಿಂಗದಲ್ಲಿ ಆ ತನುವನಡಗಿಸಿ,

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಇಷ್ಟಲಿಂಗದಲ್ಲಿ ತನುವನಡಗಿಸಿ
ಪ್ರಾಣಲಿಂಗದಲ್ಲಿ ಮನವನಡಗಿಸಿ
ಭಾವಲಿಂಗದಲ್ಲಿ ಜೀವನನಿಕ್ಷೇಪಿಸಿ
ಆ ಇಷ್ಟ ಪ್ರಾಣ ಭಾವಲಿಂಗವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ತಾನೆಂಬ ನೆನಹಡಗಿ
ದ್ವಂದ್ವಕರ್ಮಂಗಳ ನೀಗಿ
ಆ ಪರಿಪೂರ್ಣ ಪರಬ್ರಹ್ಮವೆ ತಾನಾದುದು ಮಹಾಶೀಲವಯ್ಯಾ ಅಖಂಡೇಶ್ವರಾ.