ಇಷ್ಟಲಿಂಗವೊಂದು ಪ್ರಾಣಲಿಂಗವೊಂದು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಇಷ್ಟಲಿಂಗವೊಂದು ಪ್ರಾಣಲಿಂಗ[ವೊಂದು
ಭಾವಲಿಂಗ]ವೊಂದೆಂಬ ಮಿಟ್ಟಿಯ ಭಂಡರ
ಅವರ ಮಾತ ಕೇಳಲಾಗದು. ಅಂಗಳದೊಳಗೊಬ್ಬ ಗಂಡ
ಮನೆಯೊಳಗೊಬ್ಬ ಗಂಡ
ಹಿತ್ತಿಲೊಳಗೊಬ್ಬ ಗಂಡನೆಂಬ ಸತಿಯರ ಲೋಕದ ಮಾನವರು ಮೆಟ್ಟಿ ಮೂಗಕೊಯ್ಯದೆ ಮಾಣ್ಬರೆ
ಅಯ್ಯಾ ? ಲಿಂಗತ್ರಯವೆಂದು ತೋರಿದವರಾರೊ ? `ಲಿಂಗಮೇಕಂ ಪರಂ ನಾಸ್ತಿ ಎಂದು ಸದ್ಗುರುಸ್ವಾಮಿ ಅರುಹಿದನಾಗಿ. ಷಟ್ತ್ರಿಂಶತ್ತತ್ವಕ್ಕೆ ಆಲಯಮಪ್ಪಂತಹ ಮಹಾಘನಲಿಂಗದ ಬೆಳಗು ಕರಸ್ಥಲದಲ್ಲಿ
ಮನಸ್ಥಲದಲ್ಲಿ
[ಭಾವಸ್ಥಲದಲ್ಲಿ] ವೇದ್ಯವಾದ ಬಳಿಕ ಸರ್ವಾಂಗಲಿಂಗ
ಕೂಡಲಸಂಗಯ್ಯಾ ನಿಮ್ಮ ಶರಣಂಗೆ.