ಇಷ್ಟಲಿಂಗವ ಪೂಜಿಸಿದರಾಗಿ ನಿಷೆ*

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಷ್ಟಲಿಂಗವ
ಪೂಜಿಸಿದರಾಗಿ
ನಿಷೆ*
ನೆಲೆಗೊಳ್ಳದು.
ಬಹುಲಿಂಗವ
ಪೂಜಿಸಿ
ಭ್ರಮಿತರಾದರು.
ಅನ್ಯಲಿಂಗವ
ಪೂಜಿಸಿ
ಭಿನ್ನರಾದರು.
ಸ್ಥಾವರ
ಲಿಂಗವ
ಪೂಜಿಸಿ
ಸಾವಿಗೊಳಗಾದರು
ಬಳ್ಳ
ಲಿಂಗವೆಂದು
ಪೂಜಿಸಿ
ಏನುವನರಿಯದೆ
ಹೋದರು.
ಗುಹೇಶ್ವರನೆಂಬ
ಲಿಂಗವ
ಪೂಜಿಸಿ
ನಿಮ್ಮ
ಶರಣರು
ಅಲ್ಲಿಗಲ್ಲದೆ
ಇಲ್ಲಿಗಲ್ಲದೆ
ಹೋದರು
ನೋಡಾ.