ಇಷ್ಟಲಿಂಗ ಪ್ರಾಣಲಿಂಗವೆಂದೆಂಬಿರಿ, ಇಷ್ಟಲಿಂಗವಾವುದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಷ್ಟಲಿಂಗ ಪ್ರಾಣಲಿಂಗವೆಂದೆಂಬಿರಿ
ಇಷ್ಟಲಿಂಗವಾವುದು ಪ್ರಾಣಲಿಂಗವಾವುದು ಬಲ್ಲರೆ ನೀವು ಹೇಳಿರೆ ? ಇಷ್ಟಲಿಂಗವೆಂಬುದು ದರ್ಪಣ
ಪ್ರಾಣಲಿಂಗವೆಂಬುದು ಪ್ರತಿಬಿಂಬ. ದರ್ಪಣ ಮಸುಳಿಸಿದಡೆ ಪ್ರತಿಬಿಂಬವ ಕಾಣಬಹುದೆ ? ಬಾರದು. ಇಷ್ಟಲಿಂಗಪೂಚೆ ಮಸುಳಿಸಿದಡೆ
ಪ್ರಾಣಲಿಂಗವ ಕಾಣಬಹುದೆ ? [ಬಾರದು]. ``ಇಷ್ಟಲಿಂಗಮವಿಶ್ವಸ್ಯ ಪ್ರಾಣಲಿಂಗಂ ನ ಪಶ್ಯತಿ ದರ್ಪಣಪ್ರತಿಬಿಂಬಸ್ತು ಯಥಾರೂಪಂ ತಥಾ ಭವೇತ್ ಇದು ಕಾರಣ- ಕೂಡಲಚೆನ್ನಸಂಗಮದೇವಾ
ಇಷ್ಟದಲ್ಲಿ ಪ್ರಾಣತೃಪ್ತಿಯಾದವರ ತೋರಿ ಬದುಕಿಸಯ್ಯಾ.